ಪುಟಗಳು

ಮಂಗಳವಾರ, ನವೆಂಬರ್ 5, 2013

AKGSP Gadaga ಹೋರಾಟದ ಹೆಜ್ಜೆ ಗುರುತುಗಳು .

ಅಖಿಲ ಕರ್ನಾಟಕ 
ಗಾನಯೋಗಿ ಸಂಗೀತ ಪರಿಷತ್ (ರಿ) ಗದಗ
===============================================================
ಸಂಸ್ಥಾಪಕ ಗೌರವ ಅದ್ಯಕ್ಷರು ಹಾಗೂ ಮಹಾ ಪೋಷಕರು : 
'ಪದ್ಮಭೂಷಣ' ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರು 
ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ. 
ಸಂಸ್ಥಾಪಕ ರಾಜ್ಯಧ್ಯಕ್ಷರು : ಪಂ. ಸಿ. ಕೆ. ಹಿರೇಮಠ ಗದಗ 
----------------------------------------------------------------------------------------------------------------
ಸ್ಥಾಪನೆ ದಿನಾಂಕ ೩೧ ಅಕ್ಟೋಬರ ೧೯೯೬ ರ.ನಂ ೨೪೮. -೧೯೯೬-೯೭ 
ನೊಂ, ಕಚೇರಿ ವಿಳಾಸ : ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ. 
ಆಡಳಿತ ಕಚೇರಿ ಪಂಚಾಕ್ಷರಿ ನಗರ ೪ನೆ ಅಡ್ಡರಸ್ತೆ  ಗದಗ
=============================================================
ಮಾನ್ಯೆರೇ....... 
ಸಂಗೀತ ನೃತ್ಯ ಹಾಗೂ ಕಲಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ, ಕಲಾವಿದರ ಹಿತರಕ್ಷಣೆ, ಗುರುಕುಲ ಮಾದರಿಯ ಶಿಕ್ಷಣದ ಪೋಷಣೆ, ಯುವ ಕಲಾವಿದರಿಗೆ ವೇದಿಕೆನೀಡಿ ಪ್ರೋತ್ಸಾಹಿಸುವುದಕ್ಕಾಗಿ. ಹಿರಿಯ ಅಶಕ್ತ ಕಲಾವಿದರಿಗೆ ರಕ್ಷಣೆಗಾಗಿ ಸಂಗೀತ ನೃತ್ಯ ಶಿಕ್ಷರ ನೇಮಕಾತಿಗಾಗಿ ಮತ್ತು ಶಿಕ್ಷಕರ ಸಮಸ್ಯಗಳ ಪರಿಹಾರಕ್ಕೆ ಹೊರಾದುವದಕ್ಕಾಗಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಲಿಂಗೈಕ್ಯ ಪದ್ಮ ಭೂಷಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರೆ ಹುಟ್ಟುಹಾಕಿ, ಹೆಸರಿಟ್ಟು ಹರಿಸಿ, ಮಹಾ ಪೋಷಕರಾಗಿದ್ದ ಈ ಪರಿಷತ್ತು ಕಲಾ ಕ್ಷೇತ್ರದ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ದಶಕದ ಸುಧೀರ್ಘ ಅವಧಿಯಲ್ಲಿನ ಕೆಲವು ಹೆಜ್ಜೆ ಗುರುತುಗಳು ಇಲ್ಲಿವೆ ಕಲಾವಿದರನ್ನು ತಮ್ಮ ಹಕ್ಕುಗಳಿಗಾಗಿ ಹೊರಡಲು ಶಕ್ತಿ ತುಂಬಿದ , ಕರ್ನಾಟಕದ ಸಮಸ್ತ ಕಲಾವಿದರ ಪ್ರಾತಿನಿಧಿಕ ಸಂಸ್ಥೆ ಇದು. ನಾಡಿನ ಮಹಾನ್ ಸಂಗೀತ ದಿಗ್ಗಜರು ಸಂಗೀತ ನೃತ್ಯ ಶಿಕ್ಷಕರು ಗ್ರಾಮೀಣ ಭಾಗದ ಕಲಾವಿದರರು ನಮ್ಮನ್ನು ಬೆಂಬಲಿಸಿ ಬೀದಿಗಿಳಿದು ಹೋರಾಡಿದವರ ದೊಡ್ಡ ಪಟ್ಟಿಯೇ ಇದೆ.

ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ನ ಹೋರಾಟದ ಹೆಜ್ಜೆ ಗುರುತುಗಳು . 
----------------------------------------------------------------------------------------------------------
01). 08-11-1996 ಸಂಗೀತ ಶಾಲೆ ಮುಖ್ಯೋಪಾಧ್ಯಾರ ಸಮಾವೇಶ ಗದಗ
02). 18-11-1996 ರಾಜ್ಯಮಟ್ಟದ ಸಂಗೀತ ಕಲಾವಿದರ ಸಮಾವೇಶ ಗದಗ
03). 01-11-1997 ಸಂಗೀತ ಶಿಕ್ಷಕರ ನೇಮಕಾತಿಗಾಗಿ ಒತ್ತಾಯಿಸಿ ಧರಣಿ ಬೆಂಗಳೂರು
04). 10-01-1997 ಧರಣಿ ಸತ್ಯಾಗ್ರಹ ಗದಗ
05). 14-07-1997 ಬೆಂಗಳೂರು ಚಲೋ ಧರಣಿ ಬೆಂಗಳೂರು
06). 25-06-1997 ಶಿಕ್ಷಣ ಸಚಿವರ ಮನೆ ಮುಂದೆ ಧರಣಿ ಬೆಂಗಳೂರು
07). 25-07-1997 ಆತ್ಮಾಹುತಿ ಹೋರಾಟ ಗದಗ
08). 16-06-1997 ಬೆಂಗಳೂರು ಚಲೋ ದರಣಿ ಬೆಂಗಳೂರು
09). 11-07-1997 ಹಾವೇರಿಯಲ್ಲಿ ಪ್ರತಿಭಟನೆ ಹಾವೇರಿ
10). 12-07-1997 ಉರುಳು ಸೇವೆಯ ಮೂಲಕ ಪ್ರತಿಭಟನೆ ಗದಗ
11). 06-09-1997 ಬೆಂಗಳೂರು ಚಲೋ ಬೆಂಗಳೂರು
12). 12-01-1997 ಪರಿಷತ್ ವಾರ್ಷಿಕೋತ್ಸವ ಗದಗ
13). 27-11-1997 ಉರುಳು ಸೇವೆ ಮೂಲಕ ಪ್ರತಿಭಟನೆ ಗದಗ
14). 19-12-1997 ಬೆಂಗಳೂರು ಚಲೋ ಅರಬೆತ್ತಲೆ ಮೆರವಣಿಗೆ ಬೆಂಗಳೂರು
15). 18-12-1997 ರಸ್ತೆ ರೋಕೋ ಪ್ರತಿಭಟನೆ ಗದಗ
16). 24-12-1997 ಸಂಗೀತ ಶಿಕ್ಷಕರ ನೇಮಕಾತಿಗಾಗಿ ಲಕ್ಕುಂಡಿ ಉತ್ಸವ ಬಹಿಸ್ಕಾರ ಗದಗ 
17). 02-01-1998 ಸಂಗೀತ ವಾದ್ಯ ಹೊತ್ತು ಪ್ರತಿಭಟನೆ ಗದಗ 
18). 30-01-1998 ಜಿಲ್ಲಾ ಸಂಗೀತ ಕಲಾವಿದರ ಸಮಾವೇಶ ಗದಗ 
19). 18-01-1998 ಬೆಂಗಳೂರು ಚಲೋ ಬೀದಿಯಲ್ಲಿ ಸಂಗೀತ ಬೆಂಗಳೂರು 
20). 16-02-1998 ಕಲಾವಿದರ ಬೃಹತ್ ಸಮಾವೇಶ ಬಾಗಲಕೋಟ 
21). 27-05-1998 ಉರುಳು ಸೇವೆ ಮೂಲಕ ಜಿಲ್ಲಾದಿಕಾರಿಗಳಿಗೆ ಮನವಿ ಗದಗ 
22). 23-05-1998 ಬೀದಿಯಲ್ಲಿ ಸಂಗೀತ ಹಾಡುತ್ತ ಮೆರವಣಿಗೆ ಗದಗ 
23). 09-01-1999 ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರ ನೇಮಕಾತಿಗಾಗಿ ಹೋರಾಟ ಗದಗ 
24). 10-01-1999 ಸಂಗೀತ ಬೆಳೆಸುವ ಸಮಾವೇಶ ಗದಗ 
25). 02-03-1999 ಬೆಂಗಳೂರು ಚಲೋ ಧರಣಿ ಬೆಂಗಳೂರು
26). 28-12-1999 ರಾಜ್ಯಮಟ್ಟದ ಸಂಗೀತ ಸಮ್ಮೇಳನ ಬೆಂಗಳೂರು
27). 15-10-2001 ಪ್ರತಿಭಟನಾ ಮೆರವಣಿಗೆ ಬಳ್ಳಾರಿ
28). 24-09-2001 ಸರದಿ ಉಪವಸ ಸತ್ಯಾಗ್ರಹ (16 ದಿನಗಳು) ಗದಗ

ಭಾನುವಾರ, ಅಕ್ಟೋಬರ್ 20, 2013

ಶಿಕ್ಷಣ ಸಚಿವರಿಗೆ ಬಹಿರಂಗ ಪತ್ರ


ಮಾನ್ಯ ಸಚಿವರು
ಮಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
ಕರ್ನಾಟಕ ಸರಕಾರ ಬೆಂಗಳೂರು
ಇವರಿಗೆ

ವಿಷಯ: ಸಂಗೀತ ನೃತ್ಯ ಪರೀಕ್ಷಗಳಲ್ಲಿ ಸಾಮೂಹಿಕ ನಕಲು ನಡೆಯಲು ಕಾರಣರಾದವರ ವಿರುದ್ದ 
ಕಾನೂನು ಕ್ರಮ ಕೈಗೊಳ್ಳವ ಮತ್ತು ಈ ಪರೀಕ್ಷೆಗಳು ಶಾಸ್ವತವಾಗಿ ರದ್ದು ಮಾಡುವ ಕುರಿತು. 
ಮಾನ್ಯರೇ,

ಮೇಲಿನ ವಿಷಯಕ್ಕೆ ಸಂಭಂದಿಸಿದಂತೆ ವಿನಂತಿಸಿಕೊಳ್ಳುವದೇನಂದರೆ ಕರ್ನಾಟಕ ಸರಕಾರ ನಡೆಸುವ ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿಯ ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಗಳು ಆರಂಭವಾಗಿದ್ದು, ಈಗಾಗಲೇ ಪ್ರ್ಯಾಕ್ಟಿಕಲ್ ಪರೀಕ್ಷೆಗಳು ಕೆಲವು ಮುಗಿದಿವೆ. ಇಲ್ಲಿ ಈ ಪರೀಕ್ಷೆ ತಗೆದು ಕೊಳ್ಳಲು ಸರಕಾರಿ ನೌಕರರಲ್ಲದ ಕೆಲವು ಅಯೋಗ್ಯ ನೃತ್ಯ ಸಂಗೀತ ಕಲಾವಿದರನ್ನು ಈ ಪರೀಕ್ಷಾ ಮಂಡಳಿಯ ಸಿಬ್ಬಂದಿ ದುಡ್ಡು ತಿಂದು ಇವರನ್ನು ಪರೀಕ್ಷಕರನ್ನಾಗಿ ನೇಮಕ ಮಾಡಿ ಕಳುಹಿಸಿಕೊಟ್ಟಿದೆ. ಇದರಲ್ಲಿ ಕೆಲವರಿಗೆ ಸಂಗೀತ, ನೃತ್ಯದ ಗಂಧ ಗಾಳಿಯೂ ಗೊತ್ತಿಲ್ಲ. ಇವರು ಪರೀಕ್ಷಕರಾಗಿ ಬರುವುದಕ್ಕಾಗಿಯೇ ಪರೀಕ್ಷೆ ಪಾಸು ಮಾಡಿಕೊಂಡವರಿದ್ದಾರೆ. ಇದರಲ್ಲಿಯೇ ಕೆಲವು ಜಾಣ ಪರೀಕ್ಷಕರು ಕೆಲವು ಸಂಗೀತ ನೃತ್ಯ ಗುರುಗಳೆಂದು ಹೇಳಿಕೊಳ್ಳುವವರ ಮೂಲಕ ತಾವು ಬರುವ ಸೆಂಟರಗೆ ಮೊದಲೇ ಪರೀಕ್ಷೆಗೆ ಕುಳ್ಳಿರಿಸುತ್ತಾರೆ. ಇಲ್ಲಿ ಬಂದ ನಂತರ ಯಾರು ಅತಿ ಹೆಚ್ಚು ಹಣ ಕೊಡುತ್ತಾರೆ ಅವರಿಗೆ ಹೆಚ್ಚು ಅಂಕ ನೀಡುತ್ತಾರೆ. ಲಕ್ಷಾಂತರ ರೂಪಾಯಿ ಜೆಬಿಗಿಳಿಸಿಕೊಂಡು ಮತ್ತೆ ಮುಂದಿನ ವರ್ಷದ ತಯಾರಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಸರಕಾರಿ ನೌಕರರು, ನಿಜವಾದ ಕಲಾವಿದರು ಈ ಪರೀಕ್ಷಾ ಪದ್ದತಿಯಿಂದ ದೂರ ಉಳಿಸಲಾಗಿದೆ. ಈ ವೆವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಪರೀಕ್ಷಾ ಮಂಡಳಿಯು ಈ ಪರೀಕ್ಷೆಗಳು ನಡೆಸುವಾದಾದರೂ ಯಾಕೆ ? ಇದರಿಂದ ಕಲಾವಿದರಿಗೆ ಏನು ಲಾಭ ? ಈ ಪರೀಕ್ಷೆಗಳು ಪಾಸು ಮಾಡಿಕೊಳ್ಳದವರು ಕಲಾವಿದರಲ್ಲವೇ ? ಯಾವ ಉದ್ದೇಶಕ್ಕಾಗಿ ಪರೀಕ್ಷೆಗಳು ನಡೆಸುತಿದ್ದಾರೆ ಎಂದು ಕೇಳಿದರೆ ಮಂಡಳಿ ಹತ್ತಿರ ಉತ್ತರವೇ ಇಲ್ಲ. ಹೀಗಾಗಿ ಈ ಪರೀಕ್ಷೆಗಳೇ ರದ್ದು ಮಾಡಬೇಕು. ಈ ಕುರಿತು ನಮ್ಮ ಪರಿಷತ್ ಸರಕಾರಕ್ಕೆ ಮನವಿ ಸಲ್ಲಿಸಿಯಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಈ ಪರೀಕ್ಷೆಗಳ ಮೂಲಕ ಹಣ ಮಾಡುವ ಧಂದೆ ಮಾಡುತಿದ್ದಾರೆ. ಇದರಲ್ಲಿ ಕೆಲವು ಅಯೋಗ್ಯ ನೃತ್ಯ ಶಿಕ್ಷಕರು ಮತ್ತು ಕೆಲವು ದಲ್ಲಾಳಿಗಳು ಕೈಜೋಡಿಸಿದ್ದಾರೆ. ಈ ಪರೀಕ್ಷೆಗಳಿಂದ ಕಲೆಗೆ ಅವಮಾನವಾಗುತ್ತಿದೆ. ಸರಕಾರದ ಬೊಕ್ಕಸಕ್ಕೆ ಹಾನಿಯಾಗುತ್ತಿದೆ. ಮಂಡಳಿಯ ಸಿಬ್ಬಂದಿ ಮತ್ತು ಕೆಲವು ನೃತ್ಯ ಗುರುಗಳೆಂದು ಹೇಳಿಕೊಳ್ಳುವವರಿಗೆ ಮಾತ್ರ ಲಾಭ ವಾಗುತ್ತಿದೆ. ಕಾರಣ ಈ ಪರೀಕ್ಷೆಗಳು ರದ್ದಾಗಬೇಕು. ಇದಕ್ಕೆ ಪೂರಕ ಮಾಹಿತಿ ಸಂದರ್ಭ ಬಂದಾಗ ನಾವು ನೀಡುತ್ತೇವೆ. ಎರಡನೆಯದಾಗಿ ಹೇಳುವದಾದರೆ ದಿನಾಂಕ ೨೦-ಅಕ್ಟೋಬರ -೨೦೧೩ ರಂದು ಥೇರಿ ಪರಿಕ್ಷೆಗಳು ನಡೆದಿವೆ ಈ ಪರಿಕ್ಷಗಳಲ್ಲಿ ಸಾಮೂಹಿಕವಾಗಿ ನಕಲು ಮಾಡುತ್ತಿರುವ ವರದಿಯು ದೃಶ್ಯ ಮಾಧ್ಯಮಗಳು ಪ್ರಸಾರ ಮಾಡಿವೆ ಇದನ್ನೇ ಆಧಾರವಾಗಿರಿಸಿಕೊಂಡು ಸಾಮೂಹಿಕ ನಕಲು ಮಾಡಲು ಅವಕಾಶ ನೀಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕು. ತಪ್ಪಿಸ್ಥರ ವಿರುಧ್ಧ ಕ್ರಮ ಕೈಗೊಳ್ಳುವವರೆಗೆ ನಾವು ಬಿಡುವದಿಲ್ಲ ಬೀದಿಗಿಳಿದು ಹೋರಾಟ ಮಾಡಲೇ ಬೇಕಾಗುತ್ತದೆ. ಇನ್ನೊಂದು ವಿಚಿತ್ರವಾದರೂ ಸತ್ಯವನ್ನು ತಮ್ಮ ಗಮನಕ್ಕೆ ತರ ಬಯಸುವದೆನಂದರೆ ಕರ್ನಾಟಕದಲ್ಲಿ ನೃತ್ಯ ಶಾಲೆಗಳೇ ಇಲ್ಲ. ಆದರೂ ಸಾವಿರಾರು ಮಕ್ಕಳು ನೃತ್ಯ ಪರಿಕ್ಷೆಗಳಿಗೆ ಕುಳಿತುಕೊಂಡಿದ್ದಾರೆ ಹಾಗಾದರೆ ಇವರು ಎಲ್ಲಿ ಕಲಿತು ಬಂದಿದ್ದಾರೆ ? ಇವರಿಗೆ ಪರಿಕ್ಷೆಗೆ ಕುಳಿತುಕೊಳ್ಳಲು ಅರ್ಹತೆ ಇದೆಯಾ ಇಲ್ಲವಾ ಎಂದು ಪರಿಕ್ಷೀಸುವರಾರು ? ಪರೀಕ್ಷೆಗೆ ಕುಳಿತು ಕೊಳ್ಳಲು ಸಿಲಬಸ್ ಮುಗಿಸಿದ ಬಗ್ಗೆ ಖಾತ್ರಿ ನೀಡುವವರಾರು? ಯಾರು ಹೆಚ್ಚಿನ ಸಂಖೆಯಲ್ಲಿ ಪರೀಕ್ಷೆಗೆ ಕೂಡಿಸುತ್ತಾರೋ ಅವರೇ ದೊಡ್ಡ ಗುರುಗಳಾಗುತಿದ್ದಾರೆ.ಎಷ್ಟೇ ಅನುಭವಿ ಮತ್ತು ದೊಡ್ಡ ನೃತ್ಯ ಕಲಾವಿದರಾಗಿದ್ದರೂ ಪರೀಕ್ಷಗೆ ಕುಳ್ಳಿಸದಿದ್ದರೆ ಅವರು ಗುರುಗಳೇ ಅಲ್ಲ ಎನ್ನುವ ಹಂತ ತಲುಪಿದ್ದರಿಂದ ಬಹುತೇಕ ಕಲಾ ಗುರುಗಳು ಈ ವೆವಸ್ಥೆಯಿಂದ ದೂರ ಉಳಿದಿದ್ದಾರೆ ನಿಜವಾದ ನೃತ್ಯ ಸಂಗೀತ ಕಲಾವಿದ ಗುರುಗಳನ್ನು ಪರೀಕ್ಷರನ್ನಾಗಿ ಬರದಂತೆ ಮಾಡಲಾಗಿದೆ

.
ಗದಗ ೨೧-ಅಕ್ಟೋಬರ-೨೦೧೩                                                                   ಇಂತಿ ತಮ್ಮ ವಿಶ್ವಾಸಿ

                                                                                                          ಸಿ.ಕೆ.ಹೆಚ್. ಶಾಸ್ತ್ರೀ (ಕಡಣಿ)
                                                                                                                 ರಾಜ್ಯಅಧ್ಯಕ್ಷರು
                                                                                                               ಅಖಿಲ ಕರ್ನಾಟಕ
                                                                                                   ಗಾನಯೋಗಿ ಸಂಗೀತ ಪರಿಷತ್ ಗದಗ
                                                                                                         

ಶುಕ್ರವಾರ, ಸೆಪ್ಟೆಂಬರ್ 27, 2013

ಪಂ.ಪುಟ್ಟರಾಜರೇ ಹುಟ್ಟು ಹಾಕಿಕೊಟ್ಟ ಸಂಸ್ಥೆ


ಸಂಸ್ಥೆಯ ಸಂಕ್ಷಿಪ್ತ ಪರಿಚಯ
==================

ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಕಲಾವಿದರ ಕಲ್ಯಾಣಕ್ಕಾಗಿ ಮತ್ತು ಸಂಗೀತ ಕ್ಷೇತ್ರದ ಸುಧಾರಣೆಗಾಗಿ ಮತ್ತು ಕಲಾವಿದರನ್ನು ಸಂಘತಟಿಸುವದಕ್ಕಾಗಿ ಅಸ್ತಿತ್ವಕ್ಕೆ ತರಲಾಗಿದೆ (ಸ್ಥಾಪನೆ 1996 ನೋಂ,ಸಂ:248 )ನಮ್ಮ ಉದ್ದೇಶ: ಸಂಗೀತ ನೃತ್ಯ ಶಿಕ್ಷಕರ ನೇಮಕಾತಿಯಲ್ಲಿ ಬಿ. ಮ್ಯೂಜಿಕ್, ಎಂ ಮ್ಯೂಜಿಕ್ ಪದವಿಧರರಿಗೆ ಮಾತ್ರ ಅವಕಾಶ ನೀಡಬೇಕು, ಕರ್ನಾಟಕ ಸರಕಾರ ನಡೆಸುವ ಪ್ರೌಢ ಶಿಕ್ಷಣ ಮಂಡಳಿಯ ಪರೀಕ್ಷೆಗಳು ರದ್ದು ಮಾಡಬೇಕು, ಸಂಗೀತವೆಂದರೆ ಹಾಡುಗಾರಿಕೆ ಮಾತ್ರವಲ್ಲ ಎಂಬುದು ಸರಕಾರದ ಗಮನಕ್ಕೆ ತಂದು ಸಂಗೀತ ಶಿಕ್ಷಕರ ನೇಮಕಾತಿಯಲ್ಲಿ ಶಾಸ್ತ್ರಿಯ ವಾದ್ಯ ಸಂಗೀತ ಪದವಿಧರರನ್ನು ಸಮಾನವಾಗಿ ತುಂಬಿಕೊಳ್ಳ ಬೇಕು, ಕ್ರೀಡಾ ಪಟುಗಳಿಗೆ ನಿಡುವ ಉದ್ಯೋಗ ಮೀಸಲಾತಿ ಕಲಾವಿದರಿಗೂ ಸಿಗಬೇಕು,ಸಂಸ್ಕೃತ ಮತ್ತು ಉರ್ದು ಶಾಲೆಗಳಿಗೆ ಅನುದಾನ ನೀಡುತ್ತಿರುವಂತೆ  ಸಂಗೀತ,ನೃತ್ಯ ಶಾಲೆಗಳಿಗೂ ಅನುದಾನ ನೀಡಬೇಕು, ಕಲಾವಿದರಿಗೆ ಯಸಶ್ವಿನಿ ಯೋಜನೆಯ ವೈದ್ಯಕೀಯ ಲಾಭ ಸಿಗುವಂತಾಗ ಬೇಕು ಇನ್ನು ಹತ್ತು ಹಲವಾರು ಸುಧಾರಣೆಗಳಾಗ ಬೇಕು,
ಕಲಾವಿದರ ಮತ್ತು ಕಲಾಶಿಕ್ಷಣ ಸಂಸ್ಥೆಗಳ ಕಲ್ಯಾಣಕ್ಕಾಗಿ ಪಂ.ಪುಟ್ಟರಾಜರ ಅಪ್ಪಣೆಯಮೇರೆಗೆ  ಗುರು ಪುಟ್ಟರಾಜರೇ ಸೂಚಿಸಿದ ಈ ಹೆಸರಿನೊಂದಿಗೆ ಅಸ್ತಿತ್ವಕ್ಕೆ ತರಲಾಗಿದೆ.  ದಿನಾಂಕ 8-ನವಂಬರ -1996 ರಂದು ಸಂಗೀತ ಶಾಲೆಯ ಮುಖೊಪಾಧ್ಯಾಯರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಸಂಗೀತ ಶಾಲೆಗಳಿಗೆ ಅನುದಾನ ನೀಡಲು ಸರಕಾರಕ್ಕೆ ಒತ್ತಾಯಿಸುವ ನಿರ್ಣಯ ಕೈಗೊಂಡು ಕಳುಹಿಸಲಾಯಿತು ನಿರಂತರ ಹೊರಟಮಾಡಿದ ಫಲವಾಗಿ ಇಂದು ಆಶ್ರಮದ ಸಂಗೀತ ಶಾಲೆ ಸರಕಾರದ ಅನುದಾನಕ್ಕೆ ಒಳಪಟ್ಟಿದೆ ಇದು ನಮ್ಮ ಪರಿಷತ್‌ನ ಹೋರಾಟದ ಫಲವಾಗಿ 15 ವರ್ಷಗಳ ನಂತರ ಸಿಕ್ಕ ಪ್ರತಿ ಫಲವಾಗಿದೆ. ಈ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಸಂಗೀತ ಶಿಕ್ಷರ ನೇಮಕಾತಿಗಾಗಿ ಹೋರಾಟ ಮಾಡಿಕೊಂಡು ಬಂದ ಫಲವಾಗಿ ಸಂಗೀತ ಶಿಕ್ಷಕರ ನೇಮಕಾತಿ ಯಾಗುತ್ತಿವೆ ಕಲಾವಿದರ ಕಲಾಕ್ಷೇತರದ ಕಲ್ಯಾಣ ಈ ಪರಿಷತ್ ನದ್ದಾಗಿದೆ

===========================
ಕಾರ್ಯಕ್ರಮ ಸ್ವರೂಪ
===========================

ಈ ಕಾರ್ಯಕ್ರಮವು ಉತ್ತರ ಕರ್ನಾಟಕದ ಸಂಗೀತ ನೃತ್ಯ ಚಿತ್ರಕಲೆ ಜಾನಪದ ಮೊದಲಾದ ಕಲೆಗಳ ದಿಗ್ಗಜರನ್ನು ಸ್ಮರಿಸಿ ಕೊಳ್ಳುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮದ ಮೂಲಕ ಎಲ್ಲ ಕಲೆಗಳ ಮತ್ತು ಕಲಾ ಪರಂಪರೆಯ ಶಿಷ್ಯ ಪ್ರಶಿಷ್ಯರು ಅಭಿಮಾನಿಗಳು ಒಂದೇಕಡೆ ಸೇರಿಸುವ ಪ್ರಯತ್ನವಾಗಿದೆ. ಉತ್ತರ ಕರ್ನಾಟಕದ ಯಾವುದಾದರು ಒಂದು ಜಿಲ್ಲೆಯಲ್ಲಿ ಈ ಸಮಾರಂಭ ಹಮ್ಮಿಕೊಳ್ಳಲಾಗುವುದು. ಯುವ ಕಲಾವಿದರೊಂದಿಗೆ ಹಿರಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಹೊರ ರಾಜ್ಯದ ಕಲಾವಿದರನ್ನು ಕೂಡ ಆಮಂತ್ರಿಸಿ ಇಲ್ಲಿನ ಪ್ರತಿಭೆಗಳ ಪರಿಚಯ ಮಾಡಿಕೊದಲಾಗಿವುದು ಕನಿಷ್ಠ ಮೂರು ದಿನಗಳಾದರು ಹಮ್ಮಿಕೊಳ್ಳಲಾಗುವುದು ಮುಂದಿನ ದಿನಗಳಲ್ಲಿ ಇದು ವಾರಗಳ ಕಾಲ ಏರ್ಪಡಿಸುವ ಆಶೆ ಹೊಂದಿದ್ದೇವೆ . 

ಸೋಮವಾರ, ಸೆಪ್ಟೆಂಬರ್ 16, 2013

ಬನ್ನಿ ನಮ್ಮೊಂದಿಗೆ


ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಕಲಾವಿದರ ಕಲ್ಯಾಣಕ್ಕಾಗಿ ಮತ್ತು ಸಂಗೀತ ಕ್ಷೇತ್ರದ ಸುಧಾರಣೆಗಾಗಿ ಮತ್ತು ಕಲಾವಿದರನ್ನು ಸಂಘತಟಿಸುವದಕ್ಕಾಗಿ ಅಸ್ತಿತ್ವಕ್ಕೆ ತರಲಾಗಿದೆ (ಸ್ಥಾಪನೆ 1996 ನೋಂ,ಸಂ:248 )ನಮ್ಮ ಉದ್ದೇಶ: ಸಂಗೀತ ನೃತ್ಯ ಶಿಕ್ಷಕರ ನೇಮಕಾತಿಯಲ್ಲಿ ಬಿ ಮ್ಯೂಜಿಕ್, ಎಂ ಮ್ಯೂಜಿಕ್ ಪದವಿಧರರಿಗೆ ಮಾತ್ರ ಅವಕಾಶ ನೀಡಬೇಕು,ಕರ್ನಾಟಕ ಸರಕಾರ ನಡೆಸುವ ಪ್ರೌಢ ಶಿಕ್ಷಣ ಮಂಡಳಿಯ ಪರೀಕ್ಷೆಗಳು ರದ್ದು ಮಾಡಬೇಕು, ಸಂಗೀತವೆಂದರೆ ಹಾಡುಗಾರಿಕೆ ಮಾತ್ರವಲ್ಲ ಎಂಬುದು ಸರಕಾರದ ಗಮನಕ್ಕೆ ತಂದು ಸಂಗೀತ ಶಿಕ್ಷಕರ ನೇಮಕಾತಿಯಲ್ಲಿ ಶಾಸ್ತ್ರಿಯ ವಾದ್ಯ ಸಂಗೀತ ಪದವಿಧರರನ್ನು ಸಮಾನವಾಗಿ ತುಂಬಿಕೊಳ್ಳ ಬೇಕು, ಕ್ರೀಡಾ ಪಟುಗಳಿಗೆ ನಿಡುವ ಉದ್ಯೋಗ ಮೀಸಲಾತಿ ಕಲಾವಿದರಿಗೂ ಸಿಗಬೇಕು,ಸಂಸ್ಕೃತ ಮತ್ತು ಉರ್ದು ಶಾಲೆಗಳಿಗೆ ಅನುದಾನ ನೀಡುತ್ತಿರುವಂತೆ  ಸಂಗೀತ,ನೃತ್ಯ ಶಾಲೆಗಳಿಗೂ ಅನುದಾನ ನೀಡಬೇಕು, ಕಲಾವಿದರಿಗೆ ಯಸಶ್ವಿನಿ ಯೋಜನೆಯ ವೈದ್ಯಕೀಯ ಲಾಭ ಸಿಗುವಂತಾಗ ಬೇಕು ಇನ್ನು ಹತ್ತು ಹಲವಾರು ಸುಧಾರಣೆಗಳಾಗ ಬೇಕು, ಈಗಾಗಲೇ ಸಂಗೀತ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಶಿಕ್ಷಕರಿಗೆ ಸಂಗೀತ ನೃತ್ಯ ಪಾಠ ಹೇಳಲು ಮಾತ್ರ ಅವಕಾಶ ನೀಡಬೇಕು, ಇವರಿಗೆ ಬೇರೆ ಕೆಲಸಕ್ಕೆ ಹಚ್ಚಬಾರದು ಎಂಬ ಹಲವಾರು ಬೇಡಿಕೆ ಇಟ್ಟು ಹೋರಾಡಲು ತಯಾರಾಗುತಿದ್ದೇವೆ. ಈ  ಕಾರಣಕ್ಕಾಗಿ  ನಾವು ಈ ಫೆಸ್ ಬುಕ್ ಆರಂಭಿಸಿದ್ದೇವೆ. ಈ ಜಾಲ ತಾಣದಲ್ಲಿ ನಮ್ಮ ವಿನಂತಿಯನ್ನು ಗಮನಿಸಿ ಸ್ಪಂದಿಸುತ್ತಿರಿಯಂದು ನಂಬಿ ನಿಮ್ಮನ್ನು ಗೆಳೆಯ ಗೆಳೆತಿಯರನ್ನಾಗಿ ಮಾಡಿಕೊಂಡಿದ್ದೇವೆ, ಇಲ್ಲಿ ನೀವು ನಿಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರಿ ಎಂದು ನಂಬಿದ್ದೇವೆ ಈ ನಮ್ಮ ಹೋರಾಟಕ್ಕೆ ಬೆಂಬಲ ನೀಡಲು ಆಸಕ್ತರಾಗಿದ್ದರೆ ತಮ್ಮ ಪರಿಚಯ ಪತ್ರ ಸಂಪರ್ಕ ವಿಳಾಸ ಮತ್ತು ದೂರವಾಣಿ ಕಳಿಸಿ ಕೊಡಲು ಕೋರುತ್ತೇವೆ 
ನಮ್ಮ ವಿಳಾಸ akgspgadag@gmail.com

 ಬನ್ನಿ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಿ. 

ಭಾನುವಾರ, ಸೆಪ್ಟೆಂಬರ್ 15, 2013

ಪ್ರೌಢ ಶಿಕ್ಷಣಾ ಮಂಡಳಿ ಪರೀಕ್ಷೆಗಳು ರದ್ದಾಗಬೇಕು

ಕರ್ನಾಟಕ ಸರಕಾರ ನಡೆಸುವ ಪ್ರೌಢ ಶಿಕ್ಷಣಾ ಮಂಡಳಿಯ ಪರೀಕ್ಷೆಗಳು ರದ್ದಾಗಬೇಕು ಮತ್ತು ಸಂಗೀತ ನೃತ್ಯ ಶಿಕ್ಷಣದಲ್ಲಿ ಬಿ.ಮ್ಯೂಜಿಕ್ ಎಂ.ಮ್ಯೂಜಿಕ ಪದವಿ ಹೊಂದಿದವರನ್ನುಮಾತ್ರ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳ ಬೇಕು. 
ಈ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ವಾದ್ಯ ಕಲಾವಿದರನ್ನು ಸಮಾನ ಅವಕಾಶ ನೀಡಬೇಕು. ಈ ಕೆಲವು ಮುಖ್ಯ ವಿಷಯಗಳೊಂದಿಗೆ ಇನ್ನು ಹತ್ತು ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಮುಂದಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಧಾರವಾಡದಲ್ಲಿ ಜಿಲ್ಲಾ ಮಟ್ಟದ ಶಾಸ್ತ್ರೀಯ ವಾದ್ಯ ಸಂಗೀತ ಕಲಾವಿದರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು ಈ ಸಮಾವೇಶ ನೀರಿಕ್ಷೆಗೆ ಮೀರಿ ಯಸಶ್ವಿಯಾಗಿರುವುದು ನಮ್ಮನ್ನು ತುಂಬ ಉತ್ಸಾಹಿಗಳನ್ನಾಗಿ ಮಾಡಿದೆ. ಈ ನಮ್ಮ ಹೋರಾಟಕ್ಕೆ ನಾಡಿನ ಸಮಸ್ತ ಹಿರಿಯ ಯುವ ಕಲಾವಿದರು ಬೆಂಬಲಿಸಲು ಕೋರುತ್ತೇವೆ. ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ 1997 ರಲ್ಲಿ ಅಖಂಡ ಧಾರವಾಡ ಜಿಲ್ಲೆಯಾಗಿದ್ದಾಗ ಗದುಗಿನ ಗಾನಯೋಗಿ ಪುಟ್ಟರಾಜರ ಅಮೃತ ಹಸ್ತದಿಂದ ಉದ್ಘಾಟನೆಯಾದ ಸಂಸ್ಥೆಯಾಗಿದ್ದು ಈ ಸಂಸ್ಥೆಗೆ ಪೂಜ್ಯಗುರು ಪುಟ್ಟರಾಜ ಕವಿ ಗವಾಯಿಗಳವರೆ ಹೆಸರಿಟ್ಟು, ಈ ಪರಿಷತ್ ಮಹಾ ಪೋಷಕರಾಗಿ, ನಮಗೆ ಸಂಗೀತ ಶಿಕ್ಷರ ನೇಮಕಾತಿಗಾಗಿ ಹೋರಾಟ ಮಾಡಲು ಪ್ರೇರಣೆ ನೀಡಿ ಪ್ರೋತಹಿಸಿದರು. ಅವರ ಮಾರ್ಗದರ್ಶನದಲ್ಲಿ ಅನೇಕ ಹೋರಾಟ ಮಾಡುವ ಮೂಲಕ ಸರಕಾರದ ಕಣ್ಣು ತೆರಸಿ ಸಂಗೀತ ಶಿಕ್ಷರ ನೇಮಕವಾಗುವಲ್ಲಿ ಯಸಶ್ವಿಯಾಗಿದ್ದೇವೆ.
ಈ ಸಂಗೀತ ಶಿಕ್ಷರ ನೇಮಕಾತಿ ಆರಂಭವಾದ ನಂತರ ಸರಕಾರ ನಡೆಸುವ ಪ್ರೌಢ ಶಿಕ್ಷಣಾ ಮಂಡಳಿಯ ಪರಿಕ್ಷೆಗೆ ತುಂಬಾ ಡಿಮ್ಯಾಂಡ ಬಂದು ಈ ಪರಿಕ್ಷೆಗಳು ತಮ್ಮ ಮೂಲಉದ್ದೇಶ ಮರೆತು ಸಂಗೀತ ಕ್ಷೇತ್ರವೇ ಹಾಳು ಮಾಡುತ್ತಿವೆ.ಇಂದು ಈ ಪರೀಕ್ಷೆಗಳು ಕೆಲವೇ ಜನ ನಿಜವಾದ ಕಲಾವಿದರನ್ನು ಹೊರತುಪಡಿಸಿದರೆ ಪರೀಕ್ಷಕರಾಗಿ ಬರುವ ಬಹುತೇಕ ಧಡ್ಡ ಪರೀಕ್ಷರಿಗೆ ದುಡ್ಡು ಮಾಡುವ ಕೇಂದ್ರವಾಗುತ್ತಿವೆ.ಇಲ್ಲಿ ಯಾರು ಹೆಚ್ಚು ದುಡ್ಡು ಕೊಡುತ್ತಾರೋ ಅವರಿಗೆ ಹೆಚ್ಚು ಅಂಕು ನೀಡಿ ಪಾಸು ಮಾಡಲಾಗುತ್ತಿದೆ ಇನ್ನೂ ಸ್ವಲ್ಪ ಹೆಚ್ಚು ದುಡ್ಡು ನೀಡಿದರೆ ಪರೀಕ್ಷಗೆ ಕೂಡದೆ ಇದ್ದರು ಉತ್ತಮ ಅಂಕು ನೀಡಲಾಗುತ್ತಿದೆ.ಕೆಲವರಂತೂ ಪರೀಕ್ಷಕರಾಗಿ ಬರುವದಕ್ಕಾಗಿಯೇ ಪರೀಕ್ಷೆಗಳನ್ನು ಮಾಡಿಕೊಂಡವರಿದ್ದಾರೆ ಇನ್ನೂ ಕೆಲವರು ತಮ್ಮ ಹೆಂಡತಿ ಅತ್ತೆ ಮಾವರನ್ನು ಪರೀಕ್ಷೆ ಪಾಸು ಮಾಡಿಸಿ ತಮ್ಮ ಜೊತೆಯಲ್ಲಿಯೇ ಪರೀಕ್ಷರನ್ನಾಗಿ ಕರೆದುಕೊಂಡು ಬರುತ್ತಾರೆ. ಅದರಲ್ಲಿಯೇ ಕೆಲವು ಬುದ್ದಿವಂತ ಧಡ್ಡ ಶಿಖಾಮಣಿಗಳು ಜಾಣತನ ಉಪಯೋಗಿಸಿ,ತಾವು ಬರಬೇಕೆಂದು ನಿರ್ಧರಿಸಿದ ಸೆಂಟರ್ ನಲ್ಲಿ ತಮಗೆ ದುಡ್ಡು ಕೊಡುವ ಕುಳಗಳನ್ನು ಪರೀಕ್ಷೆಗೆ ಕೂಡ್ರಿಸುತ್ತಾರೆ. ಈ ಪರೀಕ್ಷೆಗೆ ಕೂಡ ಬೇಕಾದರೆ ನಿರ್ದಿಷ್ಟ ಪಡಿಸಿದ ಶಾಲೆಯಲ್ಲಿ ಓದಲೇ ಬೇಕೆಂಬ ನಿಯಮವಿಲ್ಲ ಯಾರು ಬೇಕಾದರೂ ಎಲ್ಲಿ ಬೇಕಾದರೂ ಪರೀಕ್ಷೆಗೆ ಕುಳಿತುಕೊಳ್ಳ ಬಹುದಾಗಿದೆ.ಯಾವುದೇ ಸಂಗೀತದ ಹಿನ್ನಲೆ, ಕಡ್ಡಾಯ ಹಾಜರಾತಿ ಇಲ್ಲದೆಯೂ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿದೆ.ಕಾರಣ ಈ ರೀತಿ ನಡೆಸುವ ಪರೀಕ್ಷೆಗಳು ಬೇಕೇ?ಈ ರೀತಿ ಪಾಸದವರಿಂದ ಸಂಗೀತ ನೃತ್ಯ ಕಲೆ ಉಳಿಯಲು ಬೆಳೆಯಲು ಸಾಧ್ಯವೇ? ಈ ರೀತಿ ಪಾಸಾದವರು ಸರಳಿ, ಜಂಟಿ, ಅಲಂಕಾರ ಗೊತ್ತಿಲ್ಲದವರು ಶಾಲೆಯಲ್ಲಿ ಏನು ಸಂಗೀತ ಹೇಳಿಕೊಡಬಲ್ಲರು? ದುಡ್ಡು ಕೊಟ್ಟು ಶಿಕ್ಷಕರಾಗಿ ಹೋದ ಇವರು ಇಂದು ಸಂಗೀತ ಹೇಳಿಕೊಡಲು ಬಾರದಕ್ಕೆ ಛಪರಾಸಿ ಕೆಲಸ ಮಾಡುವ ಗತಿ ಬಂದಿದೆ. ಪಾಪ.. ಕೆಲವು ಜನ ಯುವ ಗಾಯಕರು ಸಾಧನೆಗೆ ಈ ನೌಕರಿ ಆಧಾರವಾಯಿತು ಎಂದು ಹೋದರೆ ಈ ಧಡ್ಡರ ಮಧ್ಯದಲ್ಲಿ ತಾವೂ ಗುರುತಿಸಿ ಕೊಳ್ಳುವಂತಾದದಕ್ಕೆ ಪಶ್ಚಾತಾಪ ಪಡುವಂತಾಗಿದೆ.ಸಂಗೀತ ಶಿಕ್ಷಕರೆಂದು ಹೇಳಿಕೊಳ್ಳುವದಕ್ಕೆ ನಾಚಿಕೆ ಪಡುತಿದ್ದಾರೆ. ಕಾರಣ ಇಂಥ ಪರೀಕ್ಷೆಗಳು ಬೇಕೇ? ಬೇಕೆನ್ನುವದಕ್ಕೆ ಒಂದೇ ಒಂದು ಸಕಾರಣ ಕೊಡಿ ಈ ಹೋರಾಟ ಮಾಡುವದೇ ಬೇಡ. ದಯಮಾಡಿ ಹಿರಿಯ ಸಂಗೀತ ದಿಗ್ಗಜರು ಈ ಕ್ಷೇತ್ರದ ಗೌರವ ಉಳಿಸಲು ನಮ್ಮ ಕಾಳಜಿ ಅರ್ಥ ಮಾಡಿಕೊಂಡು ಬೆಂಬಲಿಸಬೇಕು. ಇಲ್ಲದಿದ್ದರೆ ಈಗಾಗಲೇ ಎಷ್ಟೋ ಹಾಳಾದ ಈ ಕ್ಷೇತ್ರ ಸಂಪೂರ್ಣ ಹಾಳಾಗುವದರಲ್ಲಿ ಸಂಶಯ ವಿಲ್ಲಾ.

ಬುಧವಾರ, ಸೆಪ್ಟೆಂಬರ್ 11, 2013

ವಿದ್ವತ್ ಪರೀಕ್ಷೆಗಳು ನಮಗೆ ಬೇಕೇ ?

ಆತ್ಮಿಯರೇ
ಕರ್ನಾಟಕ ಸರಕಾರ ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಜೂನೀಯರ,ಸಿನೀಯರ ಮತ್ತು ವಿದ್ವತ್ ಪರೀಕ್ಷೆಗಳು ನಮಗೆ ಬೇಕೇ ?  ಪರೀಕ್ಷೆಗಳು ಅವ್ಯವಹಾರದ ತಾಣವಾಗಿವೆ. ದುಡ್ಡಿದ್ದ ದಡ್ಡ ಸಿಖಾಮಣಿಗಳಿಗೆ ದೊಡ್ಡ ಪ್ರಮಾಣದ ಅಂಕು ನೀಡಿ ದುಡ್ಡು ಮಾಡಿಕೊಳ್ಳುವ ಹುಲ್ಲುಗಾವಲವಾಗಿರುವ ಈ ಪರೀಕ್ಷೆಗಳು ಬೇಕೇ ? ಈ ಪರೀಕ್ಷೆಗಳಿಂದ ಮತ್ತು ಕೆಲವೇ ಕೆಲವರನ್ನು ಹೊರತುಪಡಿಸಿ ,ಪರೀಕ್ಷರಾಗಿ ಬರುವದಕ್ಕಾಗಿಯೇ ಪರೀಕ್ಷೆ ಮಾಡಿಕೊಂಡು ಪರೀಕ್ಷರಾಗಿ ಬರುವ ಸಂಗೀತ,ನೃತ್ಯ ಕಲಾ ಶತ್ರುಗಳಿಂದ ಈ ಕಲೆ ಉಳಿಯಲು ಬೆಳೆಯಲು ಸಾಧ್ಯವೇ ? ಹಾಗಾದರೆ ಬಿ ಮ್ಯೂಜಿಕ ಎಂ ಮ್ಯುಜಿಕ ಪದವಿಗಳು ಯಾಕೆ ಬೇಕು ? ಇನ್ನು ಹತ್ತು ಹಲವರು ಕಾರಣಗಳನ್ನು ಕೊಡಬಹುದು. ಈಗಾಗಲೇ ಈ ಪರೀಕ್ಷೆಗಳು ರದ್ದುಮಾಡುವಂತೆ ಧಾರವಾಡದಲ್ಲಿ ನಡೆದ ವಾದ್ಯ ಸಂಗೀತ ಕಲಾವಿದರ ಸಮಾವೇಶದಲ್ಲಿ ಚರ್ಚಿಸಲಾಗಿದೆ ಇದಕ್ಕೆ ಇನ್ನಷ್ಟು ವ್ಯಾಪಕ ಚರ್ಚೆಗೆ ಅವಕಾಶ ನೀಡಲು ಈ ವಿಷಯ ನಿಮ್ಮ ಮುಂದೆ ಇಟ್ಟು ನಿಮ್ಮ ಅಭಿಪ್ರಾಯ ಪಡೆಯಲು ಮುಂದಾಗಿದ್ದೇನೆ ಇದಕ್ಕೆ ನೀವೇನಂತಿರಿ ?