ಪುಟಗಳು

ಭಾನುವಾರ, ಅಕ್ಟೋಬರ್ 20, 2013

ಶಿಕ್ಷಣ ಸಚಿವರಿಗೆ ಬಹಿರಂಗ ಪತ್ರ


ಮಾನ್ಯ ಸಚಿವರು
ಮಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
ಕರ್ನಾಟಕ ಸರಕಾರ ಬೆಂಗಳೂರು
ಇವರಿಗೆ

ವಿಷಯ: ಸಂಗೀತ ನೃತ್ಯ ಪರೀಕ್ಷಗಳಲ್ಲಿ ಸಾಮೂಹಿಕ ನಕಲು ನಡೆಯಲು ಕಾರಣರಾದವರ ವಿರುದ್ದ 
ಕಾನೂನು ಕ್ರಮ ಕೈಗೊಳ್ಳವ ಮತ್ತು ಈ ಪರೀಕ್ಷೆಗಳು ಶಾಸ್ವತವಾಗಿ ರದ್ದು ಮಾಡುವ ಕುರಿತು. 
ಮಾನ್ಯರೇ,

ಮೇಲಿನ ವಿಷಯಕ್ಕೆ ಸಂಭಂದಿಸಿದಂತೆ ವಿನಂತಿಸಿಕೊಳ್ಳುವದೇನಂದರೆ ಕರ್ನಾಟಕ ಸರಕಾರ ನಡೆಸುವ ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿಯ ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಗಳು ಆರಂಭವಾಗಿದ್ದು, ಈಗಾಗಲೇ ಪ್ರ್ಯಾಕ್ಟಿಕಲ್ ಪರೀಕ್ಷೆಗಳು ಕೆಲವು ಮುಗಿದಿವೆ. ಇಲ್ಲಿ ಈ ಪರೀಕ್ಷೆ ತಗೆದು ಕೊಳ್ಳಲು ಸರಕಾರಿ ನೌಕರರಲ್ಲದ ಕೆಲವು ಅಯೋಗ್ಯ ನೃತ್ಯ ಸಂಗೀತ ಕಲಾವಿದರನ್ನು ಈ ಪರೀಕ್ಷಾ ಮಂಡಳಿಯ ಸಿಬ್ಬಂದಿ ದುಡ್ಡು ತಿಂದು ಇವರನ್ನು ಪರೀಕ್ಷಕರನ್ನಾಗಿ ನೇಮಕ ಮಾಡಿ ಕಳುಹಿಸಿಕೊಟ್ಟಿದೆ. ಇದರಲ್ಲಿ ಕೆಲವರಿಗೆ ಸಂಗೀತ, ನೃತ್ಯದ ಗಂಧ ಗಾಳಿಯೂ ಗೊತ್ತಿಲ್ಲ. ಇವರು ಪರೀಕ್ಷಕರಾಗಿ ಬರುವುದಕ್ಕಾಗಿಯೇ ಪರೀಕ್ಷೆ ಪಾಸು ಮಾಡಿಕೊಂಡವರಿದ್ದಾರೆ. ಇದರಲ್ಲಿಯೇ ಕೆಲವು ಜಾಣ ಪರೀಕ್ಷಕರು ಕೆಲವು ಸಂಗೀತ ನೃತ್ಯ ಗುರುಗಳೆಂದು ಹೇಳಿಕೊಳ್ಳುವವರ ಮೂಲಕ ತಾವು ಬರುವ ಸೆಂಟರಗೆ ಮೊದಲೇ ಪರೀಕ್ಷೆಗೆ ಕುಳ್ಳಿರಿಸುತ್ತಾರೆ. ಇಲ್ಲಿ ಬಂದ ನಂತರ ಯಾರು ಅತಿ ಹೆಚ್ಚು ಹಣ ಕೊಡುತ್ತಾರೆ ಅವರಿಗೆ ಹೆಚ್ಚು ಅಂಕ ನೀಡುತ್ತಾರೆ. ಲಕ್ಷಾಂತರ ರೂಪಾಯಿ ಜೆಬಿಗಿಳಿಸಿಕೊಂಡು ಮತ್ತೆ ಮುಂದಿನ ವರ್ಷದ ತಯಾರಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಸರಕಾರಿ ನೌಕರರು, ನಿಜವಾದ ಕಲಾವಿದರು ಈ ಪರೀಕ್ಷಾ ಪದ್ದತಿಯಿಂದ ದೂರ ಉಳಿಸಲಾಗಿದೆ. ಈ ವೆವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಪರೀಕ್ಷಾ ಮಂಡಳಿಯು ಈ ಪರೀಕ್ಷೆಗಳು ನಡೆಸುವಾದಾದರೂ ಯಾಕೆ ? ಇದರಿಂದ ಕಲಾವಿದರಿಗೆ ಏನು ಲಾಭ ? ಈ ಪರೀಕ್ಷೆಗಳು ಪಾಸು ಮಾಡಿಕೊಳ್ಳದವರು ಕಲಾವಿದರಲ್ಲವೇ ? ಯಾವ ಉದ್ದೇಶಕ್ಕಾಗಿ ಪರೀಕ್ಷೆಗಳು ನಡೆಸುತಿದ್ದಾರೆ ಎಂದು ಕೇಳಿದರೆ ಮಂಡಳಿ ಹತ್ತಿರ ಉತ್ತರವೇ ಇಲ್ಲ. ಹೀಗಾಗಿ ಈ ಪರೀಕ್ಷೆಗಳೇ ರದ್ದು ಮಾಡಬೇಕು. ಈ ಕುರಿತು ನಮ್ಮ ಪರಿಷತ್ ಸರಕಾರಕ್ಕೆ ಮನವಿ ಸಲ್ಲಿಸಿಯಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಈ ಪರೀಕ್ಷೆಗಳ ಮೂಲಕ ಹಣ ಮಾಡುವ ಧಂದೆ ಮಾಡುತಿದ್ದಾರೆ. ಇದರಲ್ಲಿ ಕೆಲವು ಅಯೋಗ್ಯ ನೃತ್ಯ ಶಿಕ್ಷಕರು ಮತ್ತು ಕೆಲವು ದಲ್ಲಾಳಿಗಳು ಕೈಜೋಡಿಸಿದ್ದಾರೆ. ಈ ಪರೀಕ್ಷೆಗಳಿಂದ ಕಲೆಗೆ ಅವಮಾನವಾಗುತ್ತಿದೆ. ಸರಕಾರದ ಬೊಕ್ಕಸಕ್ಕೆ ಹಾನಿಯಾಗುತ್ತಿದೆ. ಮಂಡಳಿಯ ಸಿಬ್ಬಂದಿ ಮತ್ತು ಕೆಲವು ನೃತ್ಯ ಗುರುಗಳೆಂದು ಹೇಳಿಕೊಳ್ಳುವವರಿಗೆ ಮಾತ್ರ ಲಾಭ ವಾಗುತ್ತಿದೆ. ಕಾರಣ ಈ ಪರೀಕ್ಷೆಗಳು ರದ್ದಾಗಬೇಕು. ಇದಕ್ಕೆ ಪೂರಕ ಮಾಹಿತಿ ಸಂದರ್ಭ ಬಂದಾಗ ನಾವು ನೀಡುತ್ತೇವೆ. ಎರಡನೆಯದಾಗಿ ಹೇಳುವದಾದರೆ ದಿನಾಂಕ ೨೦-ಅಕ್ಟೋಬರ -೨೦೧೩ ರಂದು ಥೇರಿ ಪರಿಕ್ಷೆಗಳು ನಡೆದಿವೆ ಈ ಪರಿಕ್ಷಗಳಲ್ಲಿ ಸಾಮೂಹಿಕವಾಗಿ ನಕಲು ಮಾಡುತ್ತಿರುವ ವರದಿಯು ದೃಶ್ಯ ಮಾಧ್ಯಮಗಳು ಪ್ರಸಾರ ಮಾಡಿವೆ ಇದನ್ನೇ ಆಧಾರವಾಗಿರಿಸಿಕೊಂಡು ಸಾಮೂಹಿಕ ನಕಲು ಮಾಡಲು ಅವಕಾಶ ನೀಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕು. ತಪ್ಪಿಸ್ಥರ ವಿರುಧ್ಧ ಕ್ರಮ ಕೈಗೊಳ್ಳುವವರೆಗೆ ನಾವು ಬಿಡುವದಿಲ್ಲ ಬೀದಿಗಿಳಿದು ಹೋರಾಟ ಮಾಡಲೇ ಬೇಕಾಗುತ್ತದೆ. ಇನ್ನೊಂದು ವಿಚಿತ್ರವಾದರೂ ಸತ್ಯವನ್ನು ತಮ್ಮ ಗಮನಕ್ಕೆ ತರ ಬಯಸುವದೆನಂದರೆ ಕರ್ನಾಟಕದಲ್ಲಿ ನೃತ್ಯ ಶಾಲೆಗಳೇ ಇಲ್ಲ. ಆದರೂ ಸಾವಿರಾರು ಮಕ್ಕಳು ನೃತ್ಯ ಪರಿಕ್ಷೆಗಳಿಗೆ ಕುಳಿತುಕೊಂಡಿದ್ದಾರೆ ಹಾಗಾದರೆ ಇವರು ಎಲ್ಲಿ ಕಲಿತು ಬಂದಿದ್ದಾರೆ ? ಇವರಿಗೆ ಪರಿಕ್ಷೆಗೆ ಕುಳಿತುಕೊಳ್ಳಲು ಅರ್ಹತೆ ಇದೆಯಾ ಇಲ್ಲವಾ ಎಂದು ಪರಿಕ್ಷೀಸುವರಾರು ? ಪರೀಕ್ಷೆಗೆ ಕುಳಿತು ಕೊಳ್ಳಲು ಸಿಲಬಸ್ ಮುಗಿಸಿದ ಬಗ್ಗೆ ಖಾತ್ರಿ ನೀಡುವವರಾರು? ಯಾರು ಹೆಚ್ಚಿನ ಸಂಖೆಯಲ್ಲಿ ಪರೀಕ್ಷೆಗೆ ಕೂಡಿಸುತ್ತಾರೋ ಅವರೇ ದೊಡ್ಡ ಗುರುಗಳಾಗುತಿದ್ದಾರೆ.ಎಷ್ಟೇ ಅನುಭವಿ ಮತ್ತು ದೊಡ್ಡ ನೃತ್ಯ ಕಲಾವಿದರಾಗಿದ್ದರೂ ಪರೀಕ್ಷಗೆ ಕುಳ್ಳಿಸದಿದ್ದರೆ ಅವರು ಗುರುಗಳೇ ಅಲ್ಲ ಎನ್ನುವ ಹಂತ ತಲುಪಿದ್ದರಿಂದ ಬಹುತೇಕ ಕಲಾ ಗುರುಗಳು ಈ ವೆವಸ್ಥೆಯಿಂದ ದೂರ ಉಳಿದಿದ್ದಾರೆ ನಿಜವಾದ ನೃತ್ಯ ಸಂಗೀತ ಕಲಾವಿದ ಗುರುಗಳನ್ನು ಪರೀಕ್ಷರನ್ನಾಗಿ ಬರದಂತೆ ಮಾಡಲಾಗಿದೆ

.
ಗದಗ ೨೧-ಅಕ್ಟೋಬರ-೨೦೧೩                                                                   ಇಂತಿ ತಮ್ಮ ವಿಶ್ವಾಸಿ

                                                                                                          ಸಿ.ಕೆ.ಹೆಚ್. ಶಾಸ್ತ್ರೀ (ಕಡಣಿ)
                                                                                                                 ರಾಜ್ಯಅಧ್ಯಕ್ಷರು
                                                                                                               ಅಖಿಲ ಕರ್ನಾಟಕ
                                                                                                   ಗಾನಯೋಗಿ ಸಂಗೀತ ಪರಿಷತ್ ಗದಗ